ಬಾಗಲಕೋಟೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಜಿಲ್ಲೆಯ ಕನ್ನಡಿಗರು ಸೇರಿ ಈ ವೇದಿಕೆಯನ್ನು ಉಪಯೋಗಿಸಬಹುದು. ಜಿಲ್ಲೆಯ ವಿಷಯಗಳನ್ನು ಸೇರಿಸಬಹುದು

Latest Activity

veeranna karadi added 17 photos
yesterday
i like yor are badami group
on Thursday
EKAVI ಈಕವಿ BADAMI
on Thursday
on Thursday
this water falls looks very beautiful
on Thursday
veeranna karadi added a gift to their profile page
on Thursday
veeranna karadi updated their profile
on Thursday
The rock-cut Badami Cave Temples were sculpted mostly between the 6th and 8th centuries.
on Thursday
on Wednesday
November 6
November 6
Kannadalli hege bariabeku?
November 1
I am from Chittargi in Hungund Taluk
November 1
EKAVI ಈಕವಿ HUNGUND
November 1
ಶ್ರೀ ಗಣೇಶ್ ಅವರೆ, ನಾವು ಹುನಗುಂದ ತಾಲೂಕಿನ ಅಮೀನಗಡದವರು.ಈಗ "ಈಕವಿ"ಯ ಒಬ್ಬ ಸದಸ್ಯ.ಇದೇ ರೀತಿ ನಾವು ನಮ್ಮ ಬಳಗವನ್ನು ಹೆಚ್ಚಿಸುತ್ತಾ ಹೋಗಬಹುದು.ಊರಿನ ವಾತಾವರಣ ಸ್ಥಿತಿ ಗತಿ ತಿಳಿದುಕೋಬಹುದು. ವಂದನೆಗಳೊಂದಿಗೆ ನಿಮ್ಮ ಈರ‍ಣ್ಣ ಮೊಲೀಮನಿ. iranna_1961@hotmail.com
October 27
EKAVI ಈಕವಿ HUNGUND
October 27

RSS

ಒಂದು ವರ್ಷದ ಚಿಂತನೆಯಿಂದ ಎರಡನೇ ವರ್ಷಕ್ಕೆ...

ಈ ಪುಟವನ್ನು ವಿನ್ಯಾಸಗೊಳಿಸಲು ಕ್ಷಣ ಚಿಂತಿಸಿಲ್ಲ... ಎಂಬುದು ನನ್ನ ಯೋಚನೆ. ಇದು ನನ್ನ ಮೊದಲ ಬ್ಲಾಗಂಚೆಯಲ್ಲಿ ಬರೆದದ್ದು.http://kshanachintane.blogspot.com/2008/11/blog-post.htmlಈ ಬ್ಲಾಗನ್ನು ಶುರುಮಾಡಿದಾಗ ಎಲ್ಲವೂ ಸಿದ್ಧ ಉಡುಪಿನಂತೆಯೇ ಇದ್ದು ಕೇವಲ ಬರಹವನ್ನು ಅಕ್ಷರ ಪೆಟ್ಟಿಗೆಯಲ್ಲಿ ಹಾಕಿದ್ದರೆ ಮುಗಿದಿತ್ತು. ಅದಕ್ಕೆ ಹಾಗೆ ಬರೆದಿದ್ದೆ. ಇನ್ನು ನನ್ನ ಆಲೋಚನೆಯಿದ್ದದ್ದು ಸುಭಾಷಿತಗಳ ರೀತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ನುಡಿಗಳನ್ನು ಇಲ್ಲಿ ಬರೆಯಬೇಕೆಂದು ಅನಿಸಿತ್ತು.

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!೨೦೦೯ ನವೆಂಬರ್‍ ಒಂದರಂದು ತಿರುಮಲ ತಿರುಪತಿಯ ದರ್ಶನಕ್ಕೆ ಹೋಗಿದ್ದಾಗಿನ ಒಂದೆರಡು ಘಟನೆಗಳಿವುಘಟನೆ ೧: ಬೆಟ್ಟಕ್ಕೆ ನಡೆದು ಹೋಗುತ್ತಿರುವಾಗ, ಅಲ್ಲಿ ಒಬ್ಬ ಯಾವ ಊರಿನವರು ಎಂದು ಬರುವವರ ಹೋಗುವವರ ಕೇಳುತ್ತಿದ್ದ. ಹೀಗಿರುವಾಗ, ನನಗೂ ಕೇಳಿದ. ಕನ್ನಡ, ಕರ್ನಾಟಕ ಎಂದಾಗ. ನನಗೂ ಕನ್ನಡ ಬರುತ್ತೆ ಎಂದ. ಅವನ ಜೊತೆಯಲ್ಲಿ ಪತ್ನಿ, ಮಗು (???) ಇದ್ದರು. ಮಗು ನಿದ್ದೆ ಮಾಡುತ್ತಿತ್ತು. ನನಗೆ ಸ್ವಲ್ಪ ಸಹಾಯ ಮಾಡುವಿರಾ ಎಂದು ಆತನ ಪ್ರಶ್ನೆ. ಏನು? ಎಂದೆ.ಸುಮಾರು

ಕನ್ನಡ ಬರೊಲ್ಲ! ಅದಕ್ಕೆ!!

ಕನ್ನಡ ಬರೊಲ್ಲ! ಅದಕ್ಕೆ!!ನಿನ್ನೆ ದಿನ ಬಸ್ಸಿನಲ್ಲಿ ನಡೆದ ಒಂದು ಪುಟ್ಟ ಪ್ರಸಂಗ. ಸಂಜೆ ಆರು ಗಂಟೆಗೆ ಜಯನಗರಕ್ಕೆ ಹೊರಡುವ ಪುಷ್ಪಕ್ ಬಸ್ಸಿಗೆ ಒಬ್ಬ ವೃದ್ಧೆ (ಸುಮಾರು ೬೦-೬೫ ವರ್ಷವಿರಬಹುದು) ಮತ್ತೊಬ್ಬ ಮಹಿಳೆಯ ಜೊತೆ ಬಂದರು. ಜಯನಗರ ನಾಲ್ಕನೇ ಬ್ಲಾಕಿಗೆ ಆ ವೃದ್ಧೆ ಹೋಗುವವರಿದ್ದರು. ಅವರ ಜೊತೆ ಬಂದಿದ್ದ ಮಹಿಳೆ ನಿರ್ವಾಹಕರಿಗೆ (ಕಂಡಕ್ಟರಿಗೆ) ಈ ವೃದ್ಧೆಯನ್ನು ನಾಲ್ಕನೇ ಬ್ಲಾಕಿನಲ್ಲಿ ಇಳಿಸಿರೆಂದು ಹೇಳಿದರು. ನಂತರ, ನಿರ್ವಾಹಕರು ಚೀಟಿ ಕೊಡುತ್ತಾ ಎಂಟು ರೂಪಾಯಿಕೊಡಲು ಆ ವೃದ್ಧೆಗೆ

ಕನ್ನಡಮ್ಮನ ಆರಾಧನೆ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸುಮಾರು ೨೦೦೦ ನೇ ಇಸವಿಯಲ್ಲಿ ಒಂದು ಕವಿತೆ ಬರೆದಿದ್ದೆ. ನೆರೆ ಹಾವಳಿಯಿಂದಾಗಿ ಈ ಬಾರಿಯ ರಾಜ್ಯೋತ್ಸವ ಕಾರ್ಯಕ್ರಮಗಳು ಸರಳವಾಗಿ ನಡೆಸಲು ರಾಜ್ಯ ಸರ್ಕಾರದ ಮನವಿಯಿದೆ. ಕನ್ನಡವನ್ನು ಉಳಿಸಿ, ಬೆಳೆಸಲು ಸರಳವಾಗಿ ಎಲ್ಲರೊಡನೆ ಬೆರೆತು, ಕಲೆತು, ಓದಿ-ಬರೆದು, ಮಾತಾಡಿದರೆ ಸಾಕೆಂಬುದು ನನ್ನ ಅನಿಸಿಕೆ. ಬಿಡುವಿದ್ದಾಗ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು.ಕನ್ನಡಮ್ಮನ ಆರಾಧನೆನವ್ಹೆಂಬರದ ತೇದಿ ಮೊದಲಲಿ, ಹರುಷ

ಒಂದಷ್ಟು ಮೊಬೈಲು ಸಂದೇಶಗಳು ...

ಇಲ್ಲಿ ಒಂದಷ್ಟು ಸಂಕ್ಷಿಪ್ತ ಸಂದೇಶಗಳನ್ನು ನನ್ನ ಸ್ನೇಹಿತರು ಮೊಬೈಲಿಗೆ ಕಳಿಸಿದ್ದರು. ಕೆಲವು ಸಂದೇಶಗಳು ಚಿಂತನೆಗೆ ಹಚ್ಚುವಂತಹವು. ಅವುಗಳನ್ನು ಕೆಲವನ್ನು ಬ್ಲಾಗಿನಲ್ಲಿ ಬರೆಯಬೇಕೆನಿಸಿತು. ಆಂಗ್ಲದಲ್ಲಿರುವ ಸಂದೇಶಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸಿದೆ. ಆದರೆ ಅವುಗಳನ್ನು ಹಾಗೇ ಓದಿಕೊಂಡರೆ, ಅದರ ಸೊಗಸೇ ಬೇರೆ ಎನ್ನಿಸಿತು. ಹೀಗಾಗಿ ಆಂಗ್ಲದಲ್ಲಿಯೇ ಉಳಿಸಿದ್ದೇನೆ. ಇವೆಲ್ಲ ಸದಾಕಾಲಕ್ಕೂ ಅನ್ವಯಿಸುವಂತಹುದು ಎಂದು ನನ್ನ ಅನಿಸಿಕೆ...ಇದೋ ನಿಮಗಾಗಿ...***ಮುಗ್ಧ ಮಗುವಿನ ನುಡಿಗಳು:

Members

  • veeranna karadi
  • BAGALAKOTE
  • Veerappa Yallappa Kamannavar
  • Somanath Nilugal
  • harsha indi
  • rahul chauhan
  • Abhay Doddagadad
  • ARAVIND Y
  • girish.s.r
  • Shankar C
  • harish metimath
  • Sunil Deshpande
  • Pradeepagouda
  • chetan shebinakatti
  • Ravindra Hagaratagi
  • b harsha

RSS

ಮತ್ತದೇ ಬೇಸರ, ಅದೇ ಹುರುಪು


"ಮಲೆಸೀಮೆಯಲ್ಲಿ ಈ ಪಾಟಿ ಬಿಸಿಲು ಕಂಡಿದ್ದೇ ಇಲ್ಲಾ ಭಟ್ಟರೇ, ಎಲ್ಲಿಗಾದ್ರೂ ಹೊಗುವ ಬಂದ್ರೆ ರಣಬಿಸಿಲು ನೆತ್ತಿ ಸುಡುತ್ತೆ ?" , ಮನೆ ಮುಂದಿನ ಚಿಟ್ಟೆಯಲ್ಲಿ ವಿರಮಿಸಿದ್ದ ಮೇಗಿನ ಗದ್ದೆ ರಾಮಣ್ಣ, ಅಣ್ಣ(ಅಪ್ಪಯ್ಯ)ನ ಜೊತೆ ಹರಟುತ್ತಿದ್ದ. ಅವನ ಮಾತಿಗೆ ಗೌಣುಹಾಕುತ್ತಾ ನನ್ನೆಡೆ ತಿರುಗಿದರು. ಅದು ರಾಮನಿಗೆ ಕಾಫಿ ಸಮಾರಾಧನೆ ಅಣಿ ಮಾಡು ಎನ್ನುವ ಸೂಚನೆ. ನಾನು ಒಳನಡೆದೆ. ಇಬ್ಬರೂ ಮಟ ಮಟ ಮಧ್ಯಾಹ್ನ ಕಾಫಿ ಹೀರಿ ಮತ್ತೆ ಮಾತಲ್ಲೆ ಊಟ ಮುಗಿಸಿದ್ದರು. ರಾಮಣ್ಣನಿಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಓಡಾಟ ಹೆಚ್ಚು, ಅದೂ ಯುಗಾದಿ ನಂತರ ಸುಮಾರು ಶುಭ ಸಮಾರಂಭಗಳಿಗೆ ಹೇಳಿಕೆ ನೀಡುವುದು. ಚಪ್ಪರ ಹಾಕುವುದು, ಮಂಟಪ ಮಾಡುವುದರಿಂದ ಹಿಡಿದು ಎಲ್ಲಾ ಕೆಲ್ಸಗಳಲ್ಲಿ ವ್ಯಸ್ತನಾಗಿರುತ್ತಿದ್ದ.

ಹೀಗೆ ಸದಾ ಚಟುವಟಿಕೆಯ ಜೀವಿ ರಾಮಣ್ಣನಿಗೂ ಬಿಸಿಲಿನ ಝಳ ಈ ಬಾರಿ ಚುರುಕು ಮುಟ್ಟಿಸಿದ್ದಂತೂ ನಿಜ. ಚಿಕ್ಕಂದಿನಿಂದ ಆತನನ್ನು ನಾವೆಲ್ಲಾ ರಾಮಣ್ಣ ಅಂತೆಲೆ ಕರೆಯೋದು. ಆದ್ರೆ ಆತನಿಗೆ ಏನಿಲ್ಲಾ ಅಂದ್ರೂ 45-50 ರ ಪ್ರಾಯ ಇರಬಹುದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಆದ್ರೆ ಆತನ ಚುರುಕುತನ ನಮ್ಮ ವಯಸ್ಸಿನವರಿಗೂ ಇಲ್ಲ. ಎಣ್ಣೆಗಂಪು ಬಣ್ಣದ ರಾಮಪ್ಪನ ಆಸ್ತಿ ಎಂದೂ ಮಾಸದ ಮುಗ್ಧ ನಗು. ಎರಡು ಕಿವಿಗೂ ಒಂಟಿ ಧರಿಸಿ, ಸದಾ ಅದೇ ಮಾಸಿದ ಬಿಳಿ ಅಂಗಿ ಮೊಳಕಾಲಿಗಿಂತ ಮೇಲೆ ಉಟ್ಟ ಕಚ್ಚೆ ಪಂಚೆ. ಕೈಲಿ ಎಂದಿನಂತೆ ಕರಿ ಬಣ್ಣದ ಛತ್ರಿ. ಹೊಗೆಸೊಪ್ಪು ಹೊಸೆಯುತ್ತಾ ಗೊಟಡಿಕೆ ಮೆಲ್ಲುತ್ತಾ ಶೃಂಗೇರಿ, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶಿವಮೊಗ್ಗ.... ಸೀಮೆಯ ವಕ್ತಾರನಂತೆ ಸದಾ ಓಡಾಡುವ ಇವನನ್ನು ನೋಡದವರೆ ವಿರಳ. ಸಹಕಾರ ಸಾರಿಗೆ, ನಿಸ್ಮಿತಾ, ಮಲ್ಲಿಕಾರ್ಜುನ, ಕೆಕೆಬಿ, ತುಂಗಭದ್ರಾ. ಅವಿಭಜಿತ ಶಂಕರ್ ಟ್ರಾನ್ಸ್ ಪೋರ್ಟ್ ಹೀಗೆ ಎಲ್ಲಾ ವಾಹನದಲ್ಲೂ ಡ್ರೈವರ್ ಪಕ್ಕದ ಬದಿ ಸೀಟು ಖಾಯಂ.

ಸಾಮಾನ್ಯವಾಗಿ ರಾಮಣ್ಣ ಬಸ್ ಸ್ಪಾಪ್ ಗಳಲ್ಲಿ ನಿಂತು, ಬಸ್ ಕಾಯ್ದು ಹತ್ತುತ್ತಿದ್ದದ್ದೆ ಕಮ್ಮಿ. ಮೊದಮೊದಲೆಲ್ಲಾ ಇವನು ಕೈ ಒಡ್ಡಿದ ಕಡೆಯೆಲ್ಲಾ ಬಸ್ ನಿಲ್ಲಿಸುತ್ತಿದ್ದ ಡ್ರೈವರ್ ಗಳು, ಬರಬರುತ್ತಾ ಇವನ ಕಡೆ ಉದಾಸೀನರಾಗುತ್ತಾ ಬಸ್ ಹಾಗೆ ಹೊಡೆದುಕೊಂಡು ಹೋಗತೊಡಗಿದರು. ಆದ್ರೆ ಇವ ಬಿಡಬೇಕಲ್ಲ. ತಿಂಗಳ ಕೆಳಗೆ ಜೈಪುರದಿಂದ ಮುಂದೆ ಕಲ್ಕೆರೆಗೂ ಮುನ್ನ ಸಾಮಾನ್ಯವಾಗಿ ಕೈ ಒಡ್ಡಿ ಬಸ್ ನಿಲ್ಲಿಸುತ್ತಿದ್ದ ರಾಮಣ್ಣ, ಮುಷ್ಟಿಯಲ್ಲಿ ಕಲ್ಲು ಹಿಡಿದು ಗಣ ಬಂದ ಹಾಗೆ ಆಡುತ್ತಾ ಬಸ್ ಗೆ ಅಡ್ಡವಾಗಿ ನಿಂತ್ತಿದ್ದನಂತೆ. ಡ್ರೈವರ್ ಬ್ರೇಕ್ ಒತ್ತಿದ್ದ ರಭಸಕ್ಕೆ ಹಲವರ ಮುಸುಡಿ, ಕಿವಿ ಮೂಗುಗಳು ಜಖಂ ಆಗಿದ್ದಂತೂ ಸತ್ಯ. ಆಮೇಲೆ ಏನೂ ಅರಿಯದವನಂತೆ ಮೆಲ್ಲಗೆ ಬಸ್ ಏರಿ ತನ್ನ ಸೀಟಿನಲ್ಲಿ ಕೂತ ರಾಮಣ್ಣನಿಗೆ ಕಂಡೆಕ್ಟರ್ ಬೈಗುಳ ಪುಷ್ಪವೃಷ್ಟಿಯಂತೆ ಅನಿಸಿ, ಎಂದಿನ ಪೆಕರು ನಗೆ ನಕ್ಕನಂತೆ. ಕಡೆಗೆ ಕಂಡೆಕ್ಟರ್ ಹಣೆ ಬಡಿದುಕೊಂಡು ಹೋದನಂತೆ. ಈ ಬಗ್ಗೆ ಅಣ್ಣ ಪ್ರಶ್ನಿಸಿ ಯಾಕೋ ರಾಮ ಹೀಗೆಲ್ಲಾ ಮಾಡಿದೆಯಂತೆ ಅಂದ್ರೆ, "ಅಯ್ಯೋ ಬಿಡಿ ಭಟ್ಟರೆ, ಹುಡುಗು ಮುಂಡೇವು. ಅವಕ್ಕೆನೂ ಗೊತ್ತು. ಅವರಪ್ಪನ ಕಾಲದಿಂದ ನಾನು ಬಸ್ ನಲ್ಲಿ ಓಡಾಡಿದ ಸರ್ವೀಸ್ ಇದೆ ನಂಗೆ. ಒಂಚೂರು ಮರ್ಯಾದೆ ಕೊಟ್ಟು ಅಭ್ಯಾಸ ಇಲ್ಲ ಈಗೀನಾ ಮುಂಡೆವಕ್ಕೆ" ಅನ್ನೋದೆ.

ರಾಮಣ್ಣನ್ನಂತವರು ನಮ್ಮ ಸೀಮೆಯಲ್ಲಿ ಹುಡುಕಿದರೆ ನೂರು ಮಂದಿ ಸಿಗುತ್ತಾರೆ. ಆದ್ರೆ ಇತ್ತೀಚೆಗೆ ರಾಮಣ್ಣನಂಥಹ ಟಿಪಿಕಲ್ ಮಲೆನಾಡಿನ ಜೀವಿಗಳ ಬಗ್ಗೆ ಒಂದಷ್ಟು ಹೆಚ್ಚಿನ ಆಸ್ಥೆ ಮೂಡಿತ್ತು. ಅದಕ್ಕೆ ಕಾರಣ ಇಷ್ಟೆ. ತೇಜಸ್ವಿ ಅವರ ಕಣ್ಮರೆಯ ವಿಷಾದ ರಾಗ, ಮತ್ತೆ ಇಂಥಹ ಜನ ನೋಡಿ ಮೂಡುವ ಹುರುಪು. ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನೋ ಮಾತನ್ನು ಕಾಲ ಎಲ್ಲವನ್ನು ಜೀವಂತ ಇರಿಸುತ್ತದೆ. ಹೀಗಲ್ಲಾದಿದ್ದರೆ ಹಾಗೆ ಎಂದು ತಿದ್ದುಕೊಳ್ಳೋದು ವಾಸಿ ಅನಿಸುತ್ತದೆ.

ತೇಜಸ್ವಿ ಮರೆತರೆ ನಮ್ಮನ್ನು ನಾವು ಮರೆತಂತೆ
ಅಕ್ಕಾ ಎಷ್ಟು ಚೆಂದಿತ್ತು ಗೊತ್ತಾ? ಮೇಷ್ಟ್ರು ಮೊದಲು ಹೇಳಿದಾಗ ನಾವು ಎಲ್ಲೋ ಇಲ್ಲಿ ಮನೆ ಹತ್ರಾ ಇರೋ ಕಾಡು ತರಾನೇ ಏನೋ ತೋರಿಸಿ ಕಳಿಸ್ತಾರೆ ಅಂತಾ ಮಾಡಿದ್ವಿ. ತೇಜಸ್ವಿ ಅಜ್ಜ ಓಡಾಡಿದ ಕಾಡಂತೆ ಕಣೆ. ಹೋಗ್ ನಿಂಗೆ ಪುಣ್ಯ ಇಲ್ಲ ಹೀಗೆ ಸಾಗಿತ್ತು ಪುಟ್ಟ ಪೋರಿಯ ಮಾತಿನ ಝರಿ..

ತೇಜಸ್ವಿ ಅವರ ನೆನಪಿನಲ್ಲಿ ಏ.5 ರಂದು ನಡೆದ ಚಾರಣ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ವರ್ಷಿಣಿಯ ಸಂಭ್ರಮಕ್ಕೆ ಎಣೆಯಿಲ್ಲ. ಬರೀ ಮನೆ ಸುತ್ತಣ ಕಾಡಿನಲ್ಲಿ ನಮ್ಮ ಜೊತೆ ಅಲೆಯುತ್ತಾ ಇದ್ದ ಹುಡುಗಿಗೆ ಒಮ್ಮೇಲೆ ಹೊಸದಾದ ಸಿರಿ ಕಂಡ ಅನುಭವ. ಮೂಡಿಗೆರೆಯ ವಿಸ್ಮಯಾ ಟ್ರಸ್ಟ್ ನ ಚಾರಣ ಕಾರ್ಯಕ್ರಮಕ್ಕೆ ಗೆಳತಿಯರೊಡನೆ ನನ್ನ ಚಿಕ್ಕನ ಮಗಳು ೧೦ ವರ್ಷದ ವರ್ಷಿಣಿ ಅಲ್ಲಲ್ಲ ವಾಕ್ ವರ್ಷಿಣಿ(ಮಾತಿನ ಮಳೆಗೆರೆಯುವವಳು ಅಹಹ್ಹಹಹಾ) ಕೂಡ ಹೋಗಿದ್ದಳು. ಆರೋಗ್ಯ ಕೊಂಚ ಏರುಪೇರಾದ ಕಾರಣ ನೆಚ್ಚಿನ ಗುರು ತೇಜಸ್ವಿ ಅಲೆದಾಡಿದ ತಾಣಕ್ಕೆ ನಾನು ಹೋಗಲಾಗಲಿಲ್ಲ. ಆದರೆ, ವರ್ಷಿಣಿಯ ಮಾತು, ಸಂಭ್ರಮ ಆ ನೋವನ್ನು ಮರೆ ಮಾಡಿತು. ಅಲ್ಲಿ ಪುಟ್ಟ ಪೋರಿ ಪ್ರಕೃತಿಯ ಮಡಿಲಿನಲ್ಲಿ ವಿಜ್ಞಾನಿಗಳು, ಪರಿಸರವನ್ನು ತಿಳಿದವರು, ತೇಜಸ್ವಿ ಒಡನಾಡಿಗಳ ಜೊತೆ ಏನೆಲ್ಲಾ ಕಲಿತಿರಬಹುದು. ಚಾರಣ ಮಾಡಿ, ದಿನ ನೋಡೊ ಗಿಡ ಮರ ಆದ್ರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಇನ್ನಷ್ಟು ತಿಳಿದಾಗ ಆಗುವ ಸಂತೋಷ ವರ್ಣಿಸಲು ಬರುವುದಿಲ್ಲ.

ಯಾರೂ ಬೇಡ ತೇಜಸ್ವಿ ಅವರ ಜೀವಂತ ಪಾತ್ರ ಬಿರಿಯಾನಿ ಕರಿಯಪ್ಪನನ್ನು ನೋಡಿದರೆ ಸಾಕು ತೇಜಸ್ವಿ ಬರೆದ ಕಥೆಗಳು ನಮಗರಿವಿಲ್ಲದಂತೆ ಕಣ್ಮುಂದೆ ಬಂದು ನಿಲ್ಲುತ್ತದೆ. ತೇಜಸ್ವಿ ಅಗಲಿದ ನಂತರ ಅವರ ಬಗ್ಗೆ ಜನರಲ್ಲಿ ಮೂಡುತ್ತಿರುವ ಆಸಕ್ತಿ , ಆದರಗಳನ್ನು ಕಂಡರೆ ಖುಷಿಯಾಗುತ್ತದೆ. ಆದರೆ ಅದೇ ರೀತಿ ಒಂದಿಷ್ಟು ಭಯ ಕೂಡ ಆಗುತ್ತದೆ. ಯಾವ ನಿರ್ಜೀವ ಶಕ್ತಿಗೂ ನಿಲುಕದಂತಿದ್ದವರು ತೇಜಸ್ವಿ. ಆದರೆ ಎಲ್ಲಿ ನಮ್ಮ ಜನ ತೇಜಸ್ವಿ ಎಂಬ ಬ್ರಾಂಡ್ ನೇಮ್ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೋ ಎಂಬ ಅಳುಕು ಮನದ ಮೂಲೆಯಲ್ಲಿ ಕೊರೆಯುತ್ತಿದೆ. ಏನೇ ಆದರೂ ಪ್ರಕೃತಿಯಲ್ಲಿ ಸತ್ವವಿರುವುದಷ್ಟೇ ಉಳಿಯುವುದು. ಸರಳ ಜೀವಿಗೆ ಅಭಿಮಾನದ ಕಾಮನಬಿಲ್ಲು ಸುತ್ತಿ ಬೆಟ್ಟ ಮೇಲೆ ಕೂರಿಸಿ ಉತ್ಸವ ಮಾಡುವುದು ಅನಗತ್ಯ. ನಾವಂತೂ ನಿತ್ಯ ಕಾಯಕದಲ್ಲೇ ಮೂಡಿಗೆರೆ ಸಂತನನ್ನು ಕಾಣುತ್ತೇವೆ.
ಚಿತ್ರಗಳ ಕೃಪೆ: ದಟ್ಸ್ ಕನ್ನಡ

ನೆಲೆ


ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ
ಮನೆ ಮನ ಬೆಳಗಿರಲು,
ಒಂಟಿತಾರೆ ದಿನಕರನ ಸಾಂಗತ್ಯವೇಕೆ?

ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ
ಜೀವಜಲವಾಗಿಹ ತುಂಗೆ ಇರಲು,
ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ
ಕಡಲ ಹಂಬಲವೇಕೆ?

ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ
ಇನಿದನಿ ಇಂಪಾಗಿರೆ,
ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?

ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು
ಕಾಣದೂರ ಹಂಗಿನರಮನೆಯ ವೈಭೋಗವೇಕೆ?
ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು
ಉಳಿದ ಕಾಮತೃಷೆಯೇಕೆ?

ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು
ಗೆಲುವು ಸೋಲು, ನೋವು ನಲಿವಿಗೆ
ಪಂಚಭೂತಗಳೇ ಸಾಕ್ಷಿಯಾಗಿರಲಿ
ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ
ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ

ಅನಂತಾನಂತ ನಮನ


ರಾಜು ಸಾವಿನ ಸುದ್ದಿ ಸುಳ್ಳಾಗಲಿ ಎಂದು ತಾಯಿ ಶಾರದೆಯ ಫೋಟೊ ನೋಡುತ್ತಾ ಬಹುಶಃ ಶನಿವಾರ ನಾನು ಕರೆ ಮಾಡಿದಾಗ ಎಲ್ಲರ ಬಾಯಲ್ಲೂ ಬರುತ್ತಿದ್ದದ್ದು ಒಂದೇ ವಾಕ್ಯ. "ಛೇ ಸಾವು ಬರಬಾರದಿತ್ತು. ಇದು ಸಾಯುವ ವಯಸ್ಸಲ್ಲ". ಬೆಂಗಳೂರಿನ ಮಿತ್ರರು ರಾಜು ಸಾವಿನ ಬಗ್ಗೆ ಹೇಳುತ್ತಿದ್ದರೆ, ಇತ್ತ ಕಣ್ಣಾಲಿಗಳು ತುಂಬಿ ಬಂದಿತ್ತು.

ರಾಜು ಅನಂತ ಸ್ವಾಮಿ s/o ಮೈಸೂರು ಅನಂತಸ್ವಾಮಿ(ದೊರೈ) ನನ್ನ ಗೆಳೆಯನಲ್ಲ, ಬಂಧುವಲ್ಲ, ನೆಂಟನಲ್ಲ, ಕನಿಷ್ಠ ಆತನನ್ನು ನೋಡಿರುವುದು ಒಂದೆರಡು ಬಾರಿ ಅಷ್ಟೇ. ಆದರೆ ಅವನ ಹಾಡಂತೆ 'ನೀ ನನ್ ಹಟ್ಟಿಗೆ ಬೆಳಕಾಗಿದ್ದೆ ರಾಜು. . .' ನಿತ್ಯ ತಂದೆ ಮಕ್ಕಳ ಗಾನಸುಧೆ ತುಂಗೆಯಂತೆ ನಮ್ಮ ಮನೆ ಮನದಲ್ಲಿ ಹರಿಯುತ್ತಿತ್ತು. ಆತನ ಕಂಠಸಿರಿ ಆತನನ್ನು ನನ್ನ ಆಪ್ತೇಷ್ಟರ ಸಾಲಿಗೆ ಸೇರಿಸಿತ್ತು. ಅದೆಷ್ಟೋ ಬಾರಿ ಮನನೊಂದಾಗ ರಾಜು ದನಿ ಕೇಳಿ ಸ್ವಯಂ ಸಾಂತ್ವನ ಹೇಳಿಕೊಂಡಿದ್ದು ಇದೆ.

ರಾಜು ಸಾವಿಗೆ ಕುಡಿತ ಒಂದು ಕಾರಣ ಅಷ್ಟೇ. ಆದರೆ ಇದು ಸ್ವಯಂಕೃತವೋ, ಸಹವಾಸ ದೋಷವೊ, ದುರ್ವಿಧಿಯೋ ಒಟ್ಟಿನಲ್ಲಿ ಆತನ ಸಾವು ಇಡೀ ಸಂಗೀತ ಲೋಕದ ದುರಂತಗಳಲ್ಲಿ ಒಂದು. ನನ್ನಂತಹ ಸಾಧಾರಣ ಅಭಿಮಾನಿಗಳಿಂದ ಹಿಡಿದು, ಆತನಿಂದ ಸಂಗೀತದ ಓನಾಮ ಕಲಿತ ಎಲ್ಲರ ಪಾಲಿಗೆ ಗುರುವಾಗಿ, ಹಸನ್ಮುಖಿ ಗೆಳೆಯನಾಗಿ ರಾಜು ಸದಾ ಸ್ಮರಣೀಯ. ಇಂದಿಗೂ ನಮ್ಮಡೆಯಲ್ಲಿ ಅತ್ರಿ ಸಾವಿನ ಸೂತಕ ಕಳೆದಿಲ್ಲ. ಆಗಲೇ ರಾಜು ಅಗಲಿಕೆ ಆಘಾತಕಾರಿಯಾಗಿದೆ. ಅದರಲ್ಲೂ ರಾಜು ಅವರ ತಾಯಿ, ಅಜ್ಜಿ ಈ ಆಘಾತವನ್ನು ಹೇಗೆ ಸಹಿಸುತ್ತಿದ್ದಾರೆ ಎಂದು ನೆನೆದರೆ ದೇವರ ಮೇಲೆ ಮುನಿಸಾಗುತ್ತದೆ. ರಾಜು ಬೆಳೆಸಿದ ಶಿಷ್ಯಂದಿರಲ್ಲಿ ಆತನ ಪ್ರತಿಭೆಯನ್ನು ಕಾಣುವ ಪ್ರಯತ್ನ ಪಡಬಹುದಾದರೂ, ಅನಂತಸ್ವಾಮಿ, ರಾಜು ಪರಂಪರೆ ಪೂರ್ಣವಾಗಿ ಇತಿಹಾಸದ ಪುಟ ಸೇರಲಿದೆ ಎಂಬ ಅರಗದ ಸತ್ಯ ಸದಾ ಕಾಡುತ್ತಿರುತ್ತದೆ. ಸಾವೇ ನೀನೇಷ್ಟು ಘೋರ...ನಿನಗಿದೋ ನನ್ನ ಧಿಕ್ಕಾರ...

ಕೆಲವು ಹನಿಗಳು

ಕೆಲ ಎಸ್ಎಂಎಸ್ ಸಂದೇಶದ ಭಾಷಾಂತರ....

ಜೀವನವಾಗಿದೆ ಈಗ ಗಲೀಜಾದ ಕಾಗದ
ಉರಿಸಲಾರರು ಯಾರು ಇದನು ಯಾರು
ಬರೆಯಲಾರರು ಯಾರು ಇದರ ಮೇಲೆ
ಈ ರೀತಿಯ ಬದುಕು ನಂದಾಗಿದೆ
ಸತಾಯಿಸುವವರಿಲ್ಲ, ಓಲೈಸುವವರಿಲ್ಲ ನನ್ನ

********************
ಅರಿಯದಂತೆ ಆಗಿಹೋದ ನೀ ಮನಕೆ

ಮೇಘಗಳ ನಡುವಲ್ಲಿ ನಸುಳಿ ಬಂದ ಸೌದಾಮಿನಿ
ಕಣ್ಣಹನಿಗಳೆರಡು ಉದುರುವ ಅಂತರದಲ್ಲಿ
ಬೀಸಿದ ಪ್ರಾಣವಾಯುವಿನ ತೆರದಿ
ಸುಳಿ ಸುಳಿದಾಡಿ,ಮನಕೆ ಮುದ ನೀಡಿ ನಲಿದಾಡಿ
ಮತ್ತೆ ಮತ್ತೆ ನೆನಪ ರಾಶಿ ಹೊತ್ತು ತರುವ ತಂಗಾಳಿ ನೀ

ಅರಿಯದಂತೆ ಆಗಿಹೋದ ನೀ ಮನಕೆ

ಕಾಯುವುದು ತರವೇ ನಿನಗೆ ನಾನು,
ಎಂದಿನಂತೆ ಬಾರದೇ ಹೋಗುವೆ ನೀನು

ಅರಿಯದಂತೆ ಆಗಿಹೋದ ನೀ ಮನಕೆ
ಪ್ರಶ್ನಾತೀತವಾಗಿ ಉಳಿದೆ ನನಗೆ
*********
ನನ್ನ ಇನಿಯ ತೊರೆದನು ನನ್ನ ಕೆಲ ಕ್ಷಣ
ದೂರಾಗಿ ಸನಿಹವಾದ ಎಂದಿತು ಮನ
ಅವನ ನೆನೆಯದೇ ಇರದ ಕ್ಷಣವೂ ಕ್ಷಣವಲ್ಲ
ಹೃದಯದಿ ನೆಲೆಸಿಹ ಅವನು ನನಗೆ ಕ್ಷಣಿಕವಲ್ಲ

ಮಳೆ ನಿಂತು ಹೋದ ಮೇಲೆ ಹನಿ ಎರಡು ಉದುರಿದೆ

Dr.Rajtejaswi
ಮೋಜಿನ ಮಳೆ ನಿಂತು ಆಗಲೇ ನಾಲ್ಕೈದು ದಿನವಾಯ್ತು. ಆದರೆ ಈ ವಾರ ಅಂತಹ ಸಂಭ್ರಮವಿಲ್ಲ. ಮಧ್ಯದಲ್ಲಿ ಯುಗಾದಿ ಹಬ್ಬ , ಹೋಳಿಗೆ ಊಟ ಮೆದ್ದಿದ್ದು ಬಿಟ್ಟರೆ. ಬಾಕಿಯಂತೆ ಏ.೫ ರಿಂದ ಏ ೧೨ ರ ವರೆಗೂ ಮನಸ್ಸಿಗೆ ಇಬ್ಬರನ್ನು ನೆನೆಯದೇ ಇರಲು ಸಾಧ್ಯವಾಗುವುದಿಲ್ಲ. ನೆಚ್ಚಿನ ಗುರು, ಮಾರ್ಗದರ್ಶಿ ತೇಜಸ್ವಿ , ನಾಡಿನ ಸಾಂಸ್ಕೃತಿಕ ಸಂಕೇತ ಡಾ. ರಾಜ್ ಕುಮಾರ್.


ತೇಜಸ್ವಿ ನಿರುತ್ತರದಲ್ಲಿ ಕವಿದ ಮೋಡ ಚದುರಿ ಮಳೆ ಸುರಿಸಿ, ಹರುಷವನ್ನು ಅರಿಸಿ ಸಾಗುತ್ತಿದೆ. ರಾಜ್ ನೆನಪಿನಲ್ಲಿ ಸ್ಮಾರಕ ಎಂಬ ನೆಪದಲ್ಲಿ ರಾಜ್ ಅವರ ಕನಸುಗಳು ಕಮರುತ್ತಿದೆ. ಈ ಇಬ್ಬರು ಸರಳ ಜೀವಿಗಳು ಇಂದಿನವರ ಜಂಜಾಟವನ್ನು ನೋಡುತ್ತಿದ್ದರೆ ಖಂಡಿತಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು ಎನಿಸುತ್ತದೆ. ಸ್ಮಾರಕ ನಿರ್ಮಾಣ, ಅರ್ಥವಿಲ್ಲದ ಆಚರಣೆಗೆ ತೇಜಸ್ವಿಯಂತೂ ವಿರೋಧಿಸುತ್ತಿದ್ದರು. ರಾಜ್ ಅವರು ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಕೊಂಡು ಬೆಳೆದವರು. ನಗರದಲ್ಲಿದ್ದರೂ ಸದಾ ಹಳ್ಳಿಮನೆಯ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದ ಜೀವ. ತೇಜಸ್ವಿ ನಿಸರ್ಗದ ರಮಣೀಯತೆಗೆ ಸೋತು, ಪ್ರಕೃತಿಯ ಮಡಿಲಲ್ಲಿ ಸಾಧನೆ, ಸಂಶೋಧನೆ ಮಾಡುತ್ತಾ, ಮುಗ್ಧ ಜನರೊಡನೆ ಬೆರೆತು ಸಾರ್ಥಕ ಬದುಕು ಬಾಳಿದವರು. ಈ ಎರಡು ಚೇತನಗಳಲ್ಲಿ ನಾನು ಇಷ್ಟಪಡುವುದು ಸರಳತೆ ಹಾಗೂ ಜೀವನ ಪ್ರೀತಿ, ಉತ್ಸಾಹ. ಇವರಿಬ್ಬರ ಚಿಂತನೆಗಳು ಸ್ಮಾರಕಕ್ಕೆ ಸೀಮಿತವಾಗದೇ ಅವರ ಸಾಧನೆ, ಜೀವನ ಪ್ರೀತಿ ಎಲ್ಲರಲ್ಲೂ ಆಸುಹೊಕ್ಕದರೆ ಎಷ್ಟು ಸುಂದರ. ಅದ್ಭುತ ಮಾಯಾಲೋಕದ ಕನಸು ಕಣ್ಮುಂದೆ ಕಾಣಿಸುತ್ತಿದೆ. ವಿರಮಿಸುತ್ತೇನೆ ಸದ್ಯಕ್ಕೆ.
 

Photos

Loading…

Blog Posts

BAGALAKOTE

KUDALA SANGAMA

KUDALA SANGAMA most historic place since around 800 years. The famous rivers Krishna and Ghataprabha merge here and flows towards Srisaila (another historic palce) of Andra Pradesh. To improve this historic place, Government has established a Kudala Sangama Development Board and provided nearly Rs. 45.00 Crores to develop this places has one of the most sought piligrim centre. Herewith we are showing some of the photo’s which shows most recently takenup works to improve the piligrim centre. Kuda… Continue

Posted by BAGALAKOTE on June 13, 2009 at 7:25pm

BAGALAKOTE

Pattadakal History

Pattadakal
History



The tiny village of Pattadakal is situated on the banks of the Malaprabha river. Referred to as Petrigal by Ptolemy, Pattadakal was later known variously as Raktapura (Red Town) & Pattadakal Kisuvolal . This place reached its pinnacle of glory under the Chalukyas from the seventh to the ninth centuries functioning as a royal commemorative site. The group of about ten temples, surrounded by numerous minor shrines & plinths, represents the climax of early Western Chal… Continue

Posted by BAGALAKOTE on June 13, 2009 at 7:24pm

BAGALAKOTE

Aihole History

Aihole
History



Once the capital of the early Chalukyan dynasty (6th to 8th centuries), Aihole is a picturesque village on the banks of the Malaprabha river. Variously called Ayyavole & Aryapura in the inscriptions, Aihole is historically famous as the cradle of Hindu temple architecture. There are about 125 temples divided into 22 groups scattered all over the villages and nearby fields. Most of these temples were built between the 6th & 8th centuries and some even earlier

Only mere… Continue

Posted by BAGALAKOTE on June 13, 2009 at 7:23pm

BAGALAKOTE

Badami History

Badami
History



Badami, the one time capital of the Chalukyas , is noted several temples, some structural & other rock-cut, of the 6th & 7th Centuries. The foundations of Badami, or Vatapi as it was called, were laid by Pulakeshi I (535 - 566 AD) his son Kirtivarman, the Ist (567 - 598 AD), beautified the town with temples & other buildings

Mangalesha (598 - 610 AD) brother of Kiritavarman I completed the construction of the cave temples & endowed the temples with the village… Continue

Posted by BAGALAKOTE on June 13, 2009 at 7:22pm

RSS

ekaviNadeduBandaDaari

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI    ಈಕವಿ ನೆಡೆದು ಬಂದ ಹಾದಿ ಆತ್ಮೀಯ ಕನ್ನಡಿಗರೆ, ಕರ್ನಾಟಕ ಮತ್ತು ಕನ್ನಡದ ಇಂದಿನ ದುಃಸ್ಥಿತಿಯ ಅರಿವು ತಮಗೆ ಇದ್ದೇ ಇದೆ. ಅನ್ಯ ರಾಜ್ಯಗಳ ಜನಗಳು ವಲಸೆ ಬಂದು ಇಲ್ಲಿ ತಮ್ಮದೇ ಭಾಷೆ [...]

PRESS RELEASE of ekavi of Inaguration October 4th 2003

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ  ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI   For your information: Press Release FOR IMMEDIATE RELEASE IRVINE, CALIFORNIA, USA – Kannadigas are extremely happy and proud that celebrated famous author and dramatist, Former [...]

EKAVI is a Total Kannada Organization

EKAVI is a Total Kannada Organization   EKAVI NETWORK  of KANNADIGAS all over the world ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…   Make your friends to join EKAVI for KANNADA cause. Become a Committee person to handle issues. Take your friends to the EKAVI meeting. EKAVI is an International Kannada Vedike [...]

ekavi Meeting and Directions

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI     ಈಕವಿ ಸಭೆ, ಬೆಂಗಳೂರು ನಲ್ಲಿ , ರವಿವಾರ , ಅಕ್ಟೋಬರ್ ೪ ೨೦೦೯ , ೪ ಗಂಟೆಗೆ ಇದೆ.   ಸಭೆ ನಡೆಯುವ ವಿಳಾಸ: 12, ಸುಮೇರು, ಸರ್ ಎಂ. ಏನ್. ಕೃಷ್ಣರಾವ್ ರಸ್ತೆ. ಬಸವನಗುಡಿ, ಬೆಂಗಳೂರು 560004. __________________   EKAVI [...]

NIMMA JILLEGE ekavi jothe serikondu SAHAYA maadi

ಈಕವಿ ಸಂಸ್ಥೆ ಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ  ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಸಜ್ಜಿಸಲಾಗಿದೆ.   ಬೆಂಗಳೂರಿನಲ್ಲಿ, ಹೊರರಾಜ್ಯದಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ [...]

RSS

ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಮನೋಜ್ ಇಲ್ಲದೆ ಕಾವ್ಯಳಿಗೆ ಬೇರೆ ಏನು ಇಲ್ಲ ನಿಂತರು ಅವನೇ ಕುಂತರು ಅವನೇ ಕನಸಲ್ಲೂ ಅವನದೇ ಕನವರಿಕೆ, ಅವಳು ಅವನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ಲು ಅನ್ನೋದು ಅವಳಿಗೂ ಗೊತ್ತಿರ್ಲಿಲ್ಲ ಅನಿಸುತ್ತೆ. ಅವನಿಗಾಗಿ ಏನು ಬೇಕಾದ್ರೂ ಮಾಡ್ತಾ ಇದ್ಲು, ದಿನಕ್ಕೆ ಒಂದು ಹತ್ತು ಸಲನಾದ್ರು ಮನೋಜನಿಗೆ "ನಿನ್ನ ಸಂತೋಷಕ್ಕೆ ನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಕಣೋ " ಅಂತಾನೆ ಇದ್ಲು.

ಮನೋಜ ಯಾವಾಗಲು ತಮಾಷೆಯ ಹುಡುಗ ಕಾವ್ಯನ ತುಂಬಾನೇ ರೆಗುಸ್ತ ಇರ್ತಾನೆ ಆದರೆ ಅಷ್ಟೇ ಪ್ರೀತಿ ಕೊಡ ಮಾಡ್ತಾ ಇರ್ತಾನೆ ಫೋನ್ ನಲ್ಲಿ ಅವಳ ದ್ವನಿ ಕೇಳದನೆ ಇವನು ಬೆಳ್ಳಗ್ಗೆ ಎಳೋದಿಲ್ಲ, ರಾತ್ರಿ ಗುಡ್ ನೈಟ್ ಇವನಿಗೆ ಅವಳು ಹೇಳ್ದನೆ ಇವನು ಮಲಗಿರೋ ದಿನಗಳೇ ಇಲ್ಲ, ಅಂತಹ ಪ್ರೀಮಿಗಳು.

ಕಾವ್ಯ ಅವನನ್ನ ಕೆಲವುದಿನ ಗಳಿಂದೇನು ಲವ್ ಮಾಡ್ತಾ ಇರ್ಲಿಲ್ಲ ನಿಜ ಹೇಳ್ಬೇಕು ಅಂದ್ರೆ ಅವನನ್ನ ಕಾವ್ಯ ಸುಮಾರು ವರ್ಷಗಳಿಂದ ಲವ್ ಮಾಡ್ತಾ ಇದ್ಲು ಅಂದ್ರೆ ಅವಳ ಬಾಲ್ಯ ದಿಂದ, ಹೌದು ಮನೋಜ್ ಕಾವ್ಯಳ ಅತ್ತೆ ಮಗ ಅಲ್ಲದೆ ಒಂದೇ ಸ್ಕೂಲ್, ಕಾವ್ಯ ಅವನನ್ನ ಎಷ್ಟು ಹಚ್ಚಿ ಕೊಂಡಿದ್ಲು ಅಂದ್ರೆ ಸ್ಕೂಲ್ ನಲ್ಲಿ ಮೇಸ್ಟ್ರು ಅವನನ್ನ ಸ್ಕೂಲ್ ನಿಂದ ನಾಲ್ಕು ದಿನ ಆಚೆ ಹಾಕಿದರು ಇವಳು ಸಹ ನಾಲ್ಕು ದಿನ ಹುಷಾರಿಲ್ಲ ಅಂತ ತಾನು ಸಹ ಸ್ಕೂಲ್ ಗೆ ಹೋಗಿರಲಿಲ್ಲ ಹಾಲಿನಂತ ಮನಸ್ಸು ಅಷ್ಟೇ ಸೂಕ್ಷ್ಮ ಎಲ್ಲ ವಿಷಯವನ್ನು ತುಂಬಾ ಸೀರೀಸ್ ಆಗಿ ತಗೋತಾ ಇದ್ಲು.

ನೀನು ಈಗ ದೊಡ್ಡ ಹುಡುಗಿ ಮನೋಜ್ ಜೊತೆ ಸುತ್ತುಬೇಡ ಅಂತ ಮನೆಯವರೆಲ್ಲ ಬೈದರು ಯಾರನ್ನು ಲೆಕ್ಕಿಸದೆ ಅವನೇ ನನ್ನ ಸರ್ವಸ್ವ ಅಂತ ನಂಬಿದ ಹುಡುಗಿ. ಅವನು ಅಪ್ಪ ಬೈದ್ರು ಅಮ್ಮ ಹೊಡೆದರು ಅಂತ ಬೇಜಾರ್ ಮಾಡ್ಕೊಂಡ್ರೆ ಕಾವ್ಯ ಅವನನ್ನ ತನ್ನ ತೊಡೆ ಮೇಲೆ ಮಲಗಿಸಿಕೊಂಡು ಸಮಾದಾನ ಮಾಡ್ತಾ ಇದ್ಲು ಅವನು ಅಷ್ಟೇ ಇವಳನ್ನ ಅಷ್ಟೇ ಪ್ರೀತಿ ಮಾಡ್ತಾ ಇದ್ದ. ಹೈಸ್ಕೂಲ್ ಮುಗಿದು ಕಾಲೇಜ್ ಹೋಗುವಾಗಲು ಜೊತೆಗೆ ಹೋಗ್ತಾ ಇದ್ರೂ ಅವನು ಒಂದು ವೇಳೆ ಫ್ರೆಂಡ್ಸ್ ಜೊತೆ ಎಲ್ಲಾದರು ಹೋದ್ರೆ ಇವಳು ಪ್ರತಿ ನಿಮಿಷಕ್ಕೂ ಎಲ್ಲಿದ ಏನು ಮಾಡ್ತಾ ಇದ್ದೀಯ ಇನ್ನು ಯಾವಾಗ ಬರೋದು ಅಂತ ಫೋನ್ ನಲ್ಲೆ ವಿಚಾರಿಸುತ್ತಾ ಇದ್ಲು. ಕಾಲೇಜ್ ಕಂಪಾಸ್ ನಲ್ಲಿ ಅವನು ಬೇರೆ ಹುಡುಗಿಯರ ಜೊತೆ ಒಬ್ಬನೇ ಇರುದನ್ನ ಎಲ್ಲಾದರು ನೋಡಿದ್ರೆ ಇವಳು ಅವನು ಹೋದ ಮೇಲೆ ಆ ಹುಡುಗಿ ಮನೆಗೆ ಹೋಗಿ ಅವರ ಅಪ್ಪ ಅಮ್ಮ ನ ಹತ್ರ ಜಗಳನೇ ಮಾಡಿ ಬಂದಿರೊಳು.

ಮನೆಯವರೆಲ್ಲ ಆದಷ್ಟು ಬೇಗ ಇವರಿಬ್ಬರನ್ನ ಗಂಟ್ಟು ಹಾಕಿ ಕೈ ಬಿಡಬೇಕಪ್ಪ ಅಂತ ತಿರ್ಮಾನ ಮಾಡಿದ್ರು ಅಲ್ಲದೆ ಇನ್ನು ನಾಲ್ಕು ತಿಂಗಳಲ್ಲೇ ಮಧುವೆ ಮಾಡಬೇಕು ಅಂತ ಎಲ್ಲರು ಒಪ್ಪಿಕೊಂಡಿದ್ದರು. ಆಗ ಇವರಿಬ್ಬರನ್ನ ಹಿಡಿಯೋರೆ ಇರ್ಲಿಲ್ಲ, ಈ ವಿಷಯ ತಿಳಿದಾಗ ಹೆಚ್ಚು ಖುಷಿ ಪಟ್ಟಿದ್ದು ಅವನಿಗಿಂತ ಕಾವ್ಯನೇ ಜಾಸ್ತಿ .

ಆದರೆ ಮನೋಜನಿಗೆ ಇದೆ ಮೊರುತಿಂಗಳ ಹಿಂದೆ ಪ್ರೀತಿ ಅನ್ನೋ ಹುಡುಗಿ ಪರಿಚಯವಾಗಿದ್ಲು ಅದೇ ಪರಿಚಯ ಮುಂದುವರೆದು ಆ ಹುಡುಗಿ ಇವನನ್ನ ಲವ್ ಮಾಡು ಅಂತ ಒತ್ತಾಯಿಸುತ್ತ ಇದ್ಲು, ಆದರೆ ಇವನಿಗೆ ಅದು ಒಪ್ಪಿಗೆ ಇರೋಲ್ಲ ನನಗೆ ಆಗಲೇ ಮಧುವೆ ನಿಶ್ಚಯ ಆಗಿದೆ ಅಂತ ತುಂಬಾನೇ ಹೇಳ್ತಾನೇ ಆದರೆ ಪ್ರೀತಿ ಇದ್ಯಾವುದನ್ನು ಕೇಳೋಕೆ ತಯಾರಿರಲಿಲ್ಲ. ಪ್ರೀತಿ ಮನೋಜನಿಗೆ ನೀನು ನನ್ನ ಮಧುವೆ ಆಗದೆ ಇದ್ರೆ ನಾನು ಇವತ್ತೇ ಸತ್ತು ಹೋಗ್ತೀನಿ ಅಂತ ಒಂದು ದಿನ ಇವನ ಎದುರುರಿಗೆ ಆತ್ಮಹತ್ಯಗೆ ಪ್ರಯತ್ನ ಪಟ್ಟಿರ್ತಳೆ ಮನೋಜ ಅವಳ ಸ್ಥಿತಿ ನೋಡೋಕೆ ಆಗದೆ ಇನ್ಮೇಲೆ ಹೀಗೆಲ್ಲ ಮಾಡ್ಕೋ ಬೇಡ ನಾನು ನಿನ್ನ ಲವ್ ಮಾಡ್ತೀನಿ ಅಂತ ಮಾತು ಕೊಟ್ಟು ಮನೆಗೆ ಬರ್ತಾನೆ ತಾನು ಮಾಡ್ತಾ ಇರೋದು ತಪ್ಪು ಅಂತ ಗೊತ್ತಿದ್ರು ಪ್ರೀತಿಗೆ ಮಾತು ಕೊಟ್ನಲ್ಲ ಅಂತ ಮನಸ್ಸಲ್ಲೇ ಕೊರಗುತ್ತ ಇರ್ತಾನೆ ಇನ್ನೇನು ಅವನ ಕಾವ್ಯ ಳ ಮಧುವೆಯ ಒಂದು ವಾರ ಇರುತ್ತೆ ಆಗ ಪ್ರೀತಿ ಇವನಿಗೆ ಒಂದು ಮಸಾಜ್ ಕಳಿಸಿರ್ತಲೇ "ನಾನು ಮಧುವೆ ಆದ್ರೆ ನಿನ್ನನ್ನೇ ಇಲ್ಲ ಅಂದ್ರೆ ನಾನು ಜೀವಂತ ವಾಗಿ ಇರೋಲ್ಲ" ಅಂತ ಕಳಿಸಿರ್ತಳೆ ಇವನಿಗೆ ದಿಕ್ಕೇ ತೋಚದ ಹಾಗೆ ಆಗುತ್ತೆ. ಈ ವಿಷಯನ ಹೇಗಾದ್ರು ಮಾಡಿ ಕಾವ್ಯಗೆ ತಿಳಿಸಿದರೆ ಅವಳೇ ಹೋಗಿ ಪ್ರೀತಿಗೆ ಬುದ್ದಿ ಹೇಳ್ತಾಳೆ ಅಂತ ಒಂದು ದಿನ ಇವನು ಕಾವ್ಯಳನ್ನ ಯಾರು ಇಲ್ಲದ ಸುಂದರವಾದ ಪ್ರದೇಶಕ್ಕೆ ಕರ್ಕೊಂಡು ಹೋಗತ್ತಾನೆ. ಪ್ರೀತಿ ಬಗ್ಗೆ ಎಲ್ಲ ಇವಳಿಗೆ ಹೇಳ್ತಾನೆ.

ಕಾವ್ಯ :- ನೀನು ಈಗ ಏನು ಮಾಡ ಬೇಕು ಅನ್ಕೊಂಡಿದ್ದಿಯ?

ಮನೋಜ :- (ಅವನು ಇವಳನ್ನ ಸುಮ್ಮನೆ ರೆಗಿಸಲೆಂದು ) ಇಲ್ಲ ಕಣೆ ನನಗೆ ಯಾಕೋ ಮನಸ್ಸು ಒಪ್ಪುತ್ತ ಇಲ್ಲ ಅವಳು ನನ್ನ ತುಂಬಾನೇ ಲವ್ ಮಾಡ್ತಾ ಇದಾಳೆ ನಾನೇನಾದ್ರು ಅವಳಿಗೆ ಸಿಗಲ್ಲ ಅಂತ ಗೊತ್ತಾದ್ರೆ ಅವಳು ಸತ್ತು ಬಿಟ್ತಳೆ ನಾನು ಏನು ಮಾಡ್ಲಿ ? ಆಗ ನಾನು ನೆಮ್ಮದಿ ಇಂದ ಇರೋಕೆ ಆಗುತ್ತ ನಾನು ಸಂತೋಷದಿಂದ ಇರೋಕೆ ಆಗುತ್ತ.

ಕಾವ್ಯ :- ಒಂದು ವೇಳೆ ನಾನು ಸತ್ತರೆ ???????

ಮನೋಜ :- ಹಾಗೇನಾದ್ರೂ ಆದರೆ ನಾನು ಅವಳನ್ನೇ ಮಧುವೆ ಆಗ ಬಿಡ್ತೀನಿ. ಆಗ ನಾನು ಅವಳ ಜೊತೆ ಖುಷಿಯಾಗಿ, ಸಂತೋಷದಿಂದ ಇರ್ತೀನಿ ಹ್ಹ ಹ್ಹ ಹ್ಹ ಹ್ಹ (ಅವನು ತಮಾಷೆಗಾಗಿ ಹೇಳ್ತಾನೆ )

ಕಾವ್ಯ :- ನೀನು ನಿಜವಾಗ್ಲೂ ನಾನು ಸತ್ತರೆ ಸಂತೋಷದಿಂದ ಇರ್ತಿಯ ?

ಮನೋಜ :- ಅಯ್ಯೋ ನಿನ್ನ ಆಣೆಗೂ ನಾನು ಸಂತೋಷದಿಂದ ಇರ್ತೀನಿ ಕಣೆ
(ಅವನು ತಮಾಷೆಗಾಗಿ ಹೇಳ್ತಾನೆ )

ವಿಧಿಯ ಆಟ ಶುರುವಾಗಿದ್ದೆ ಇಲ್ಲಿಂದ ಮನೋಜ ಹೇಳಿದ್ದೆಲ್ಲ ನಿಜ ಅಂತ ನಂಬಿದ ಕಾವ್ಯ ಒಂದು ಚೀಟಿಯಲ್ಲಿ

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಅಂತ ಬರೆದು ಇಟ್ಟು ಶವದ ಪೆಟ್ಟಿಗೆಯಲ್ಲಿ ತಾನೇ ಶವ ವಾಗಿ ಮಲಗಿರ್ತಳೆ ನನ್ನ ಕತೆಯ ಕಥಾನಾಯಕಿ ಕಾವ್ಯ .

!


!


!


!



!


!

!






ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?


ಅವಳ ದಾರಿಯಲಿ
ನಿಮ್ಮ "ದೊಡ್ಡಮನಿ.ಮಂಜು"
9742495837
ಮುಂದುವರೆಯುತ್ತದೆ........... !

“ಬತ್ತಿ ಹೋದ ಸಂಗೀತ "ಗಂಗೆ"


ಬತ್ತಿ ಹೋದ ಸಂಗೀತ "ಗಂಗೆ" ಗಂಗೂಬಾಯಿ ಹಾನಗಲ್ ರವರನ್ನು ಮೌನದಲ್ಲಿ ಸ್ಮರಿಸುತ್ತ
ಹಿಂದೂಸ್ತಾನಿ ಸಂಗೀತ ಲೋಕದ ಶ್ರೇಷ್ಟ ಗಾಯಕಿ ಗಂಗೂಬಾಯಿ ಹಾನಗಲ್ ಬಗ್ಗೆ ನಾನು ನನ್ನ ಸಣ್ಣ ವಯಸ್ಸಿನಲ್ಲಿ ಪಠ್ಯ ಒಂದರ ಮೊಲಕ ತಿಳಿದುಕೊಂಡಿದ್ದೆ ಹಿಂದೂಸ್ತಾನಿ ಸಂಗೀತ ಮಯಾವಾಗುತ್ತಿರುವ ಈ ಸಮಯದಲ್ಲಿ ಸಂಗಿತದ ಕೋಟೆ ಕಟ್ಟಿ ಮೆರೆದ ಮಹಾನ್ ವ್ಯಕ್ತಿ ನಮ್ಮ ನಾಡಿನ ಗಂಗೊಬಾಯಿ ಹಾನಗಲ್.


ಆಗ ನಂದು ತುಂಬಾ ಸಣ್ಣ ವಯಸ್ಸು ಅದೇನೋ ಹೇಳ್ತಾರಲ್ಲ "ಬಾಯಲ್ಲಿ ಬೇರಲಿಟ್ರೆ ಕಚ್ಚೋಕು ಬರಲ್ಲ" ಅಂತಹ ವಯಸ್ಸು ನನ್ನದು, ಅಂದು ಒಂದು ದಿನ ನನ್ನ ಶಾಲೆಯಲ್ಲಿ ತುಂಬಾ ನಿಶ್ಯಾಬ್ದದಿಂದ ಕೂಡಿತ್ತು ಅದೇನೋ ಗೊತ್ತಿಲ್ಲ ಎಲ್ಲರು ಅಂದು ಉತ್ಸಾಹದಿಂದ ಕೊತಿದ್ವಿ ಈ ದಿನಕ್ಕಾಗಿ ಕಾಯ್ತಾ ಇದ್ವಿ ಏಕೆಂದರೆ ಅಂದಿನ ವಿಷಯ ಕನ್ನಡ ಗದ್ಯ ಭಾಗದ ಗಂಗೂಬಾಯಿ ಹಾನಗಲ್ ಅವರ ಜೀವನದ
ಬಗ್ಗೆ ಪಾಠ ಮಾಡ್ತಾ ಇದ್ರು ನಿಜಾ ಹೇಳ್ಬೇಕು ಅಂದ್ರೆ ಅಂದಿನ ಪಾಠನಮ್ಮ ಜೊತೆ ಇದ್ದರೆಗಂಗೂಬಾಯಿ ಹಾನಗಲ್ ನಮ್ಮ ಜೊತೆ ಇದ್ದರೆ ಅನಿಸುತ್ತೆ ಅಲ್ವ !

ಅವರನ್ನ ನಾನು ತುಂಬಾ ಹತ್ತಿರದಿಂದ ನೋಡ್ಬೇಕು ಅಂತ ನನಗೆ ತುಂಬಾನೆ ಆಸೆ ಇತ್ತು ಏಕೆಂದರೆ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ, ಅಭಿಮಾನಿ ಅಂದಾಕ್ಷಣ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಜ್ಞಾನ ಏನು ಇಲ್ಲ ಆದ್ರೆ ಸಂಗೀತ ಕೇಳುವ ಹುಚ್ಚು ಕೇಳುತ್ತಾ ಹಾಡುವ ಹವ್ಯಾಸ ನನಗಿದೆ ಹಾಗಾಗಿ ನಾನು ಸಂಗೀತ ಯಾವುದೇ ಒಂದು ಎಳೆಯನ್ನು ಸಹ ಗೌರವಿಸುತಿನಿ. ಈ ನಾಲ್ಕು ಸಾಲುಗಳು ನನ್ನ ಬ್ಲಾಗ್ ನಲ್ಲಿ ಬರೀಬೇಕು ಅದನ್ನ ಎಲ್ಲರು ಓದಿ ನನ್ನ ಕಾಮೆಂಟ್ಸ್ ಗಳ ಲಿಸ್ಟ್ ಬೆಳಿಬೇಕು ಅಂತ ನಾನು ಬರಿತ ಇಲ್ಲ ನಮ್ಮ ನಿಮ್ಮೆಲ್ಲರನ್ನು ಅಗಲಿದ
ಗಂಗೂಬಾಯಿ ಹಾನಗಲ್ ಅವರಿಗೆ ಈ ಮೊಲಕ ನಾನು ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ.

ಪ್ರೀತಿಯ ನನ್ನ ಗೆಳೆಯ/ಗೆಳತಿಯರೆ ಇವತ್ತು ನಾವೇನಾದರೂ ಸಾದಿಸ ಬೇಕು ಅಂದು ಕೊಂಡು ಹೊರಟರೆ ನಮ್ಮ ಹಿಂದೆ ಮಾದ್ಯಮಗಳ ಮುಖಾಂತರ ಪ್ರಚಾರ ಸಿಗುತ್ತೆ ಆದರೆ ಯವುದೇ ಪ್ರಚಾರವಿಲ್ಲದೆ ಇಡಿ ವಿಶ್ವವನ್ನೇ ತನ್ನ ಕಡೆಗೆ ಸೆಳೆದುಕೊಂಡ
ಸಂಗೀತ ಲೋಕದ ಶ್ರೇಷ್ಟ ಗಾಯಕಿ ನಮ್ಮ ಗಂಗೂಬಾಯಿ ಹಾನಗಲ್ . ಇದೋ ತಾಯಿ ನಿನಗೆ ನನ್ನ ನಮನ.

ನನ್ನಿಂದ ಇದಿನಿಯ ವರೆಗೂ ಏನನ್ನು ಸಾಡಿಸಲು ಆಗಿಲ್ಲ ಅಂತ ನಾನು ಯಾವತ್ತು ಕೊರಗುವುದಿಲ್ಲ ಏಕೆಂದರೆ "
ಸಾದನೆ ಮಾಡಿದವರ ಸ್ಮರಿಸುವುದೇ ಒಂದು ದೊಡ್ಡ ಸಾದನೆ ಅಲ್ವ !


ಬತ್ತಿ ಹೋದ ಸಂಗೀತದ ನದಿಯನ್ನು "ಗಂಗೆ"ಯಂತೆ ತುಂಬಿಸಲು ಮತ್ತೆ ನೀ ಹುಟ್ಟಿಬಾ"

ಇಂತಿ

ತೇವವಾದ ಕಣ್ಣೀರಿನ ರೆಪ್ಪೆಯಲ್ಲಿ
ನಿಮ್ಮ ದೊಡಮನಿ.ಮಂಜುContinue

ಈ ಪ್ರೀತಿನೆ ಹೀಗೆ !

ನಿಜಾ ಅಲ್ವ !
ಈ ಪ್ರೀತಿನೆ ಹೀಗೆ ಯಾವಾಗ ಯಾರಿಂದ ಯಾರಿಗೆ ಹೇಗೆ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ ! ಪ್ರೀತಿ ಮಾಡೋರ್ನ ಕೇಳಿ ನೋಡಿ ಅವರೆಲ್ಲ ಹೇಳೋದು ಇಷ್ಟೇ "ಮಗ ಅವಳನ್ನ ನೋಡಿದ ತಕ್ಷಣ ನನಗೆ ಅವಳು ಇಷ್ಟ ಆಗಿಬಿಟ್ಲು " ಇನ್ನು ಕೆಲವರ್ನ ಕೇಳಿ ನೋಡಿ "ಅದೇಕೋ ಗೊತ್ತಿಲ್ಲ ಕಣೆ ಅವನು ಅಂದ್ರೆ ನನಗೆ ತುಂಬಾ ಇಷ್ಟ " ಅಂತಾರೆ ನಿಜಾ ಹೇಳಬೇಕು ಅಂದ್ರೆ ಅವರಲ್ಲಿ ಈ ಪ್ರೀತಿ ಹುಟ್ಟೋಕೆ ಏನು ಕಾರಣ ಅಂತ ಅವರಿಗೆ ಗೊತ್ತಿರಲ್ಲ ಅಥವಾ ನಾನು ಅವನ/ಅವಳನ್ನ ಯಾಕೆ ಲವ್ ಮಾಡ್ತಾ ಇದೀನಿ ಅಂತ ಗೊತ್ತಿರಲ್ಲ ಆದ್ರು ಅವರೆಲ್ಲ ಲವ್ ಮಾಡ್ತಾನೆ ಇರ್ತಾರೆ ಅಲ್ವ !

ಒಂದು ಸರ್ವೇ ಪ್ರಕಾರ ಒಬ್ಬ ಹುಡುಗಿ ಒಬ್ಬ ಹುಡುಗನ್ನ ಇಷ್ಟ ಪಡ್ತಾ ಇದ್ದಾಳೆ ಅಂದ್ರೆ ಅವನಲ್ಲಿ ಇರೋ ಒಳ್ಳೆಯ ತನ, ನಿಸ್ವರ್ತ ಸ್ನೇಹ, ಪರಿಶುದ್ದ ಮನಸ್ಸು ಅಥವಾ ಯಾವುದೊ ಒಂದು ಕಾರಣಕ್ಕೆ ಅವಳಿಗೆ ಇಷ್ಟ ಆಗಿರ್ತಾನೆ ಆದ್ರೆ ಇನ್ನು ಕೆಲವರು ಹಾಗಲ್ಲ "ದಿನಕೊಂದು ಬೈಕ್ ತಗೊಂಡು ಫಿಲಂ ತೋರಿಸಿ ಅಲ್ಲಿ ಇಲ್ಲಿ ಸುತ್ತುಹರಿಸಿ ಕೇಳಿದನ್ನೆಲ್ಲ ಕೊಡಿಸುವಂತ ಹುಡುಗನ್ನೇ ಇಷ್ಟ ಪಡ್ತಾರೆ "
ಹಾಗಾದ್ರೆ ಪ್ರೀತಿ ಅಂದ್ರೆ ಇದೇನಾ ?

ಅಲ್ಲ !
ಅದು ಕೇವಲ ಆಕರ್ಷಣೆ ಮಾತ್ರ "ಪ್ರೀತಿ ಅನ್ನೋದು ಒಂದು ತಪಸ್ಸು". ಅದು ನಮಗೆ ಬೇಕೆಂದಾಗ ಬಯಸೋಕೆ, ಬೇಡ ಅಂದಾಗ ಬಿಸಾಡೋಕೆ ಮರದಲ್ಲಿ ಇರೋ ಹಣ್ಣು ಅಲ್ಲ ಮನೇಲಿ ಸಾಕೋ ಗಿಳಿನು ಅಲ್ಲ . ಈ ಪ್ರೀತಿ ಹುಟ್ಟುಬೇಕಾದ್ರೆ ಯಾರಿಗೂ ಹೇಳಿ ಕೇಳಿ ಹುಟ್ಟಲ್ಲ ಹುಟ್ಟೋಕೆ ಯಾರ ಅಪ್ಪಣೆನು ಬೇಕಿಲ್ಲ ಯಾಕೆಂದರೆ

ಹೇಳಿ ಬರುವುದು ಜೀವನ.
ಹೇಳದೆ ಬರುವುದು ಸಾವು.
ತಿಳಿದು ತಿಳಿಯದೆ ಆಗುವುದು ಪ್ರೀತಿ.

ಪ್ರೀತಿನ ಪ್ರೀತಿಯಿಂದ ಪ್ರೀತಿಸಿದರೆ ಪ್ರೀತಿ ಪ್ರೀತಿಯಾಗಿರುತ್ತೆ ಏಕೆಂದರೆ ಪ್ರೀತಿಯನ್ನು ಪ್ರೀತಿಸುವ ಪ್ರೀತಿ ಪ್ರೀತಿಗಾಗಿ ಪ್ರೀತಿಸುವ ಪ್ರೀತಿಯನ್ನು ಪ್ರೀತಿಸುತ್ತದೆ ! ಅಲ್ವ !

ನಿನ್ನ ಕಿರು ನಗೆ !



ನನ್ನ ನೀ
ಒಂದು ಕ್ಷಣವೂ
ಪ್ರೀತಿಸದಿದ್ದರು ಚಿಂತೆಯಿಲ್ಲ
ಕಡೆಯ ಪಕ್ಷ
ನಿನ್ನ ಕಿರು ನಗೆಯ ವರವ
ಕೊಡುವುದಾದರೆ ಚಿತೆಯಿಂದ
ಎದ್ದು ಬಂದು ಸ್ವೀಕರಿಸುವೆ
ಮರು ಜನ್ಮಕೆ ಕರುಣಿಸುವುದಾದರೆ
ಈ ಕ್ಷಣವೇ ಮಡಿದು
ನನ್ನೊಲವಿನ ಗೋರಿಯಾಗುವೆ,,,,,

"ದೇವರಲ್ಲೊಂದು ಪ್ರಾರ್ಥನೆ"


ನನ್ನ ಎರಡು ಕಣ್ಣುಗಳು
ಕುರುಡಾಗಿ ಹೋಗಲಿ ದೇವರೇ,,,,,
ನನ್ನವಳ ಸೌಂದರ್ಯ ನಾ ಕಂಡ ದಿನವೇ,,,,,

ನನ್ನ ಎರಡು ಕಿವಿಗಳು
ಕಿವುಡಾಗಿ ಹೋಗಲಿ ದೇವರೇ,,,,,
ನನ್ನವಳ ಮಧುರ ಸ್ವರವನ್ನು
ಕೇಳಿದ ತಕ್ಷಣವೇ,,,,,

ನಾ ನಾಡುವ ಮಾತುಗಳೆಲ್ಲ
ನಿಂತು ಹೋಗಲಿ ದೇವರೇ,,,,,
ನನ್ನ ಪ್ರೀತಿ ನನ್ನವಳಿಗೆ ಹೇಳಿದ
ಮರುಕ್ಷಣವೇ,,,,,

ನನ್ನ ಈ ಉಸಿರೇ
ನಿಂತು ಹೋಗಲಿ ದೇವರೇ,,,,,
ನನ್ನವಳು ನನ್ನ ನೋಡಿ
ನಕ್ಕ ಕ್ಷಣವೇ,,,,,

ನನ್ನ ಉಸಿರುನಿಂತ ಬಳಿಕ
ಅವಳ ದಾರಿಯಲಿ ನನ್ನನ್ನು
ಶಿಲೆಯಾಗಿ ಮಾಡು ದೇವರೇ,,,,,
ಆ ಶಿಲೆಯಲ್ಲು ನನ್ನ ಹೃದಯ
ಅವಳ ಹೆಸರನ್ನೇ ಜಪಿಸುತದ್ದೆ,,,,,

*******

 
 

About

BAGALAKOTE BAGALAKOTE created this social network on Ning.

Create your own social network!

Forum

BAGALAKOTE

EKAVI Information

Started by BAGALAKOTE Sep 1.

BAGALAKOTE

ekavi 2003 2004 -2005 -2006 -2007

Started by BAGALAKOTE Jun 14.

BAGALAKOTE

EKAVI SCHOOL ADOPTION PROGRAMS

Started by BAGALAKOTE Jun 14.

BAGALAKOTE

ekavi avtivities 2008

Started by BAGALAKOTE Jun 14.

BAGALAKOTE

ekavi activities 2009

Started by BAGALAKOTE Jun 14.

Events

Groups

RSS

"ಸಹಿ"ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!

*****



ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸದಿಂದ, ಬ್ಯಾಂಕೊಂದರಲ್ಲಿ (ಕರ್ನಾಟಕದಲ್ಲಿ!) ವ್ಯವಹರಿಸುವಾಗ ಅನುಭವಿಸಿದ ಕಿರಿಕಿರಿಯ ಅನುಭವವನ್ನು "ಕನ್ನಡ, ಕನ್ನಡ ಹಾ ಸಹಿಗನ್ನಡ" ಲೇಖನದ ಮೂಲಕ ('ಹಾಯಿದೋಣಿ' ಅಂಕಣ, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ, ೧ನೇ ನವಂಬರ್ ೨೦೦೯) ಶ್ರೀಯುತ ಲಕ್ಷ್ಮಣ ಕೊಡಸೆಯವರು ಕನ್ನಡಿಗರ ಹಕ್ಕಾಗಬೇಕಾಗಿರುವ "ಕನ್ನಡದಲ್ಲಿ ಗ್ರಾಹಕ ಸೇವೆ"ಯ ಬಗ್ಗೆ ಕನ್ನಡಿಗರು ತೋರಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಘೋಷಣೆಗೆ ಆಕರ್ಷಣೆಗೊಳ್ಳುವುದು, ಕನ್ನಡ ಭಾಷೆಯನ್ನುಳಿಸಲು ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕೆಂದುಕೊಳ್ಳುವುದು, ಇತರ ಭಾಷಿಕರಿಗೆ ಹೋಲಿಸಿಕೊಂಡು ನಾವು ನಿರಭಿಮಾನಿಗಳೆಂದುಕೊಳ್ಳುವ ಈ ಯಾವುದು ನಮ್ಮ ಕನ್ನಡ ಭಾಷೆಯ ಉನ್ನತಿಗೆ ಪರಿಹಾರವಲ್ಲ. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸದಲ್ಲಿ ನಮ್ಮ-ನಿಮ್ಮಂತ ಶ್ರೀ ಸಾಮಾನ್ಯನ ಪಾತ್ರ ಬಹಳ ಹಿರಿದಾದದ್ದು ಎಂಬ ಮಾತುಗಳನ್ನು ಕೊಡಸೆಯವರು ಈ ಮೂಲಕ ತಿಳಿಹೇಳಿದ್ದಾರೆ.

ಸಹಿ ಎಂಬುದು ವ್ಯಕ್ತಿಯೊಬ್ಬನ ವೈಯುಕ್ತಿಕ ಸಂಕೇತ, ತನ್ನ ಅಭಿ ವ್ಯಕ್ತಿಯ ಲಾಂಛನ ಎಂಬುದು ನೂರಕ್ಕೆ ನೂರು ಸತ್ಯ. ಅಂತೆಯೇ ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿ ಹೊರ ಹೊಮ್ಮಿರುವ ಭಾರತದ, ಕರ್ನಾಟಕ ಪ್ರಾಂತ್ಯದ ಭಾಷೆ ಕನ್ನಡ ಎಂಬುದು ಸಹ ಅಷ್ಟೆ ಸತ್ಯವಾದದ್ದು. ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನ ನಮಗೆ ಸವಲತ್ತು ಒದಗಿಸಿದೆ. ಇದರಂತೆ ಕರ್ನಾಟಕದಲ್ಲಿನ ಎಲ್ಲಾ ವ್ಯವಹಾರಸ್ಥರು ಕನ್ನಡ ಅರಿತವರಾಗಿ ತಮ್ಮ ಎಲ್ಲಾ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವರ ಮೂಲ ಧರ್ಮವಾಗಬೇಕಾದದ್ದು ಸಹಜವಾದದ್ದು. ಮುಖ್ಯವಾಗಿ ನಾವು ಎಲ್ಲರೊಡನೆ ಕನ್ನಡದಲ್ಲಿ ವ್ಯವಹರಿಸುವಂತಾದರೆ ಮಾತ್ರ ನಮ್ಮ ಹಕ್ಕಿಗೂ ಬೆಲೆ ಬರುತ್ತದಲ್ಲವೆ? ಇಲ್ಲಿ ನಾವು ಗಮನಿಸಬೇಕಾಗಿರುವುದು, ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಣ್ಣ ರೀತಿಯಲ್ಲಿ ನಾವು ಒಂದು ಆಂದೋಲವನ್ನೇ ಹುಟ್ಟು ಹಾಕಬಹುದಾಗಿದೆ.

ಹೌದು ಕರ್ನಾಟಕದಲ್ಲಿ, 'ಕನ್ನಡದಲ್ಲಿ ಗ್ರಾಹಕ ಸೇವೆ' ಕುರಿತಾಗಿ ನಾನು ಇಲ್ಲಿ ಹೇಳ್ತಾ ಇದೀನಿ. ಬ್ಯಾಂಕಿನಲ್ಲಿ ಕನ್ನಡ ಇಲ್ಲ ಅಂದ್ರೆ, ಅವರು ಕನ್ನಡದಲ್ಲಿ ಸೇವೆ ಕೊಡ್ದೆ ಇರೋದು ಒಂದು ಕಾರಣವಾದರೆ, ನಾವು ಕನ್ನಡ ಉಪಯೋಗಿಸದೆ ಇರೋದು ಇನ್ನೊಂದು ಕಾರಣ. ಅದಕ್ಕಗಿ ನಾವು ಹೀಗೆ ಮಾಡಬಹುದಲ್ಲವೇ.

೧] ಕೇವಲ ಸಹಿ ಮಾತ್ರವಲ್ಲ! ಇನ್ನು ಮುಂದೆ ನಾವು ನಮ್ಮ ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲೇ ಬರೆಯೋಣ
೨] ಬ್ಯಾಂಕಿನ ಎಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳೋಣ
೩] ಬ್ಯಾಂಕಿನೊಡನೆ ಯಾವುದೇ ವ್ಯವಹಾರವಿರಲಿ ಪತ್ರ ವ್ಯವಹಾರ ಕನ್ನಡದಲ್ಲೇ ಮಾಡೋಣ
೪] ಬ್ಯಾಂಕಿನ ಕರೆ ಕೇಂದ್ರಗಳಿಂದ ಕರೆ ಬಂದಾಗ ಅಥವ ನಾವು ಅವರಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡಲು ಆಗ್ರಹಿಸೋಣ
೫] ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ, ಬ್ಯಾಂಕಿಗೆ ಹಣ ತುಂಬುವಾಗ, ಹಣ ತೆಗೆಯುವಾಗ ಕನ್ನಡದ ಅರ್ಜಿ ನಮೂನೆಗಳಿಗೆ ಆಗ್ರಹಿಸೋಣ. ಅವರು ಕೊಡುವ ನಮೂನೆಗಳಲ್ಲಿ ಕನ್ನಡದಲ್ಲೇ ಎಲ್ಲ ವಿವರಗಳನ್ನು ನಮೂದಿಸೋಣ.
ಇದು ಬ್ಯಾಂಕಿನವರಿಗೆ ಕನ್ನಡದ ಅನಿವಾರ್ಯತೆಯನ್ನು ಹುಟ್ಟು ಹಾಕುತ್ತದೆ. ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕನ್ನಡ ಬರದ ಕೆಲಸಗಾರರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ.

ಇದು ಕೇವಲ ಬ್ಯಾಂಕ್ ಗೆ ಮಾತ್ರ ಸೀಮಿತವಲ್ಲ. ನಾವು ಗ್ರಾಹಕ ಸೇವೆ ಪಡೆಯೋ ಎಲ್ಲೆಡೆ (ರೈಲು, ಬಸ್ಸು ಟಿಕೆಟ್ಟು ಖರೀದಿಸುವಾಗ, ವಿಮಾ ಕಂಪನಿಗಳೊಡನೆ ವ್ಯವಹರಿಸುವಾಗ, ಮೊಬೈಲ್ ಕಂಪನಿಗಳ ಕರೆ ಕೇಂದ್ರದವರೊಡನೆ ಮಾತನಾಡುವಾಗ, ಅಂಗಡಿ-ಮುಂಗಟ್ಟು-ಮಾಲ್ ಗಳಲ್ಲಿ ವ್ಯವಹರಿಸುವಾಗ) ಕನ್ನಡವನ್ನು ಈ ರೀತಿ ನಾವು ಉಪಯೋಗಿಸುವ ಹಕ್ಕು ನಮಗಿದೆ.


ಇದು ಅಭಿಮಾನ ಮತ್ತು ನಮ್ಮ ಅಂತಂಗದ ಧ್ವನಿಯಾಗಿ ಹೊರಹೊಮ್ಮುವಂತಾಗಬೇಕು ಎಂಬುದು ಕೊಡಸೆಯವರ ಅಭಿಲಾಷೆ.

ಎಲ್ಲರಿಗೂ "ಕರ್ನಾಟಕ ರಾಜ್ಯೋತ್ಸವ" ಶುಭಾಶಯಗಳು.

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?

***

ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.
ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.
ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ.
*****
ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)

ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.

ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.
*****
ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......

ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!

ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.

ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?

ಕೆಳಗಿನ ಚಿತ್ರ ನೋಡಿ.

ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.

ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.

ಚಂದ್ರಶೇಖರನ್ ಕಲ್ಯಾಣ ರಾಮನ್,
ಹಳದಿ - ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

***

ಇತರ ಭಾಷಿಕರಿಗೆ ದೀಪಾವಳಿ ಶುಭಾಶಯ, ಕನ್ನಡಿಗರಿಗೆ ಮಾತ್ರ "ದಿವಾಳಿ" ಯ ಶಾಪ!

*****
ಇವತ್ತಿನ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಭಾರತೀಯರೆಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸಿದೆ. ಲಗತ್ತಿಸಿರುವ ಚಿತ್ರ ಗಮನಿಸಿ.


ಲಕ್ಷ್ಮಿಯ ಬಲಗೈ ಯಿಂದ ಭಾರತೀಯ ಭಾಷೆಗಳಲ್ಲಿ ಶುಭಾಶಯದ ಹೊಳೆ ಹರಿದಿದೆ. ತಮಿಳಿನಲ್ಲಿ ದೀಪಾವಳಿ ವಾಳ್ತುಕ್ಕಳ್, ತೆಲುಗಿನಲ್ಲಿ ಹ್ಯಾಪಿ ದೀಪಾವಳಿ, ಗುಜರಾತಿ, ಬಂಗಾಳಿ, ಹಿಂದಿ ಹೀಗೆ ಇನ್ನಿತರ ಭಾಷೆಗಳಲ್ಲಿ ಶುಭ ದೀಪಾವಳಿ ಎಂದು ಶುಭಾಶಯ ತಿಳಿಸುತ್ತಿದೆ.

ಕನ್ನಡಿಗರಿಗೆ ಕೊಟ್ಟಿರುವ ಶಾಪ ಏನು ಗೊತ್ತ! ಲಕ್ಷ್ಮಿಯ ಎಡಕ್ಕಿರುವ ಆನೆ ಸೊಂಡಿಲ ಪಕ್ಕ ನೋಡಿ. "ಹಾ ಪಿ ದಿವಾಳಿ".
ಹ್ಯಾಪಿಗೇನೋ ಅರ್ಥ ಗೊತ್ತಿರುವುದೆ (ಆ 'ಹ್ಯಾಪಿ' ನೂ ಸಹ ಇವರು ಸರಿಯಾಗಿ ನಮೂದಿಸಿಲ್ಲ. 'ಹಾ' ಕೆಳಗಿನ 'ಯ' ಕಾರ ಎಗರಿ ಹೋಗಿದೆ).

"ದಿವಾಳಿ" ಅಂದ್ರೆ ಏನು ಅಂತ ನಿಮಗೆ ಗೊತ್ತಿರಬಹುದು! ಒಮ್ಮೆ ಪದಕೋಶದ ಪುಟ ಸಹ ನೋಡಿ.


ಈ ಜಾಹೀರಾತಿನಿಂದ ಸಾಬೀತಾಗುತ್ತದೆ. "ದೀಪಾವಳಿ" ನ "ದೀಪಾವಳಿ" ಅಂತಾನೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಹೇಳೋದು ಅಂತ. ಕನ್ನಡದಲ್ಲೂ ನಾವು "ದೀಪಾವಳಿ" ಅಂತಾನೆ ಹೇಳ್ತಿದ್ದಿದ್ದು. ಈ "ದಿವಾಳಿ" ಹಾವಳಿ ಕನ್ನಡಿಗರ ಮೇಲೆ ಹೇಗೆ ಯಾವಾಗ ಎಲ್ಲಿಂದ ಶುರು ಆಯ್ತು ಅನ್ನುವುದೆ ಪ್ರಶ್ನೆ?

ರಾಜ್ಯಾದ್ಯಂತ ನೆರೆ ಉಂಟಾಗಿ ಬೀದಿಗೆ ಬಿದ್ದಿರುವ ಕನ್ನಡಿಗರಿಗೆ ಈ ರೀತಿಯಾಗಿ "ದಿವಾಳಿ" ಪಟ್ಟ ಕಟ್ಟುತ್ತಿದ್ದಾರೆಯೆ?
ಖಂಡಿತಾ ನಾವು ದಿವಾಳಿಯಾಗುವುದು ಬೇಡ. ದೀಪವನ್ನು ಬೆಳಗಿಸಿ ದೀಪಾವಳಿ ಆಚರಿಸೋಣ. ಸಮಸ್ತ ಕನ್ನಡಿಗರ ಬಾಳಿನಲ್ಲಿ ಈ ದೀಪಾವಳಿ ಹೊಸ ಬೆಳಕನ್ನು ಮೂಡಿಸುವಂತಾಗಲಿ...
**
ಚಂದ್ರಶೇಖರನ್ ಕಲ್ಯಾಣ ರಾಮನ್
*****

Badge

Loading…
 

© 2009   Created by BAGALAKOTE on Ning.   Create Your Own Social Network

Badges  |  Report an Issue  |  Privacy  |  Terms of Service